ಬಸ್ ಗುದ್ದಿ ಅಂಬುಲೆನ್ಸ್ ಚಾಲಕ ಗಂಭೀರ

ನಮ್ಮ ಪ್ರತಿನಿಧಿ ವರದಿ
ಉಡುಪಿ : ಖಾಸಗಿ ಬಸ್ ಹಾಗೂ ಅಂಬುಲೆನ್ಸ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಅಂಬುಲೆನ್ಸ್ ಚಾಲಕ ವಾಹನದಲ್ಲಿ ಸಿಕ್ಕಿಹಾಕಿಕೊಂಡಿದ್ದು  ಸುಮಾರು ಅರ್ಧ ಗಂಟೆಗಳ ಕಾಲ ಸಾರ್ವಜನಿಕರು ಹರಸಾಹಸಪಟ್ಟು ಹೊರತೆಗೆದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಬ್ರಹ್ಮಾವರ ಸಮೀಪದ ಹೇರೂರು ಸೇತುವೆ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ
ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಪ್ರಸ್ತುತ ಶಿವಮೊಗ್ಗದಲ್ಲಿ ವಾಸವಾಗಿರುವ ರಾಘವೇಂದ್ರ ಪೂಜಾರಿ (35) ಗಂಭೀರ ಗಾಯಗೊಂಡ ಅಂಬುಲೆನ್ಸ್ ಚಾಲಕ. ಈತ ಶಿವಮೊಗ್ಗದಿಂದ ರೋಗಿಯೊಬ್ಬರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ  ಕುಂದಾಪುರ ಕಡೆಗೆ ಹೋಗುತ್ತಿದ್ದ ವೇಳೆ ಹೇರೂರು ಸೇತುವೆ ಬಳಿ ಏಕಮುಖ ಸಂಚಾರದಲ್ಲಿ ಖಾಸಗಿ ಬಸ್ಸೊಂದು ಅಂಬುಲೆನ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ಚಾಲಕ ರಾಘವೇಂದ್ರ ಸೀಟಿನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದು  ಆತತನ್ನು ಸಾರ್ವಜನಿಕರು ಸುಮಾರು ಅರ್ಧಗಂಟೆಗಳ ಕಾಲ ಹರಸಾಹಸಪಟ್ಟು ಹೊರತೆಗೆದಿದ್ದಾರೆ
ರಾಘವೇಂದ್ರನ ಎರಡೂ ಕಾಲುಗಳು ಜಖಂಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ