ಬಳ್ಕುಂಜೆ ಕೊಟ್ನಾಯಗುತ್ತುವಿನಲ್ಲಿ ಅಕ್ರಮ ಮರಳುಗಾರಿಕೆ ತಡೆಯಿರಿ

ಸಾಂದರ್ಭಿಕ ಚಿತ್ರ

ಬಳ್ಕುಂಜೆ ಪಂಚಾಯತ್ ವ್ಯಾಪ್ತಿಯ ಕೊಟ್ನಾಯಗುತ್ತು ಎಂಬಲ್ಲಿ ನಸುಕಿನ ವೇಳೆ ಶಾಂಭವಿ ನದಿಯಿಂದ ಮರಳು ತೆಗೆಯುತ್ತಿರುವ ವಹಿವಾಟು ಜೋರಾಗಿ ನಡೆಯುತ್ತಿದೆ  ಈ ಮರಳು ಸಾಗಿಸಲು ಟಿಪ್ಪರುಗಳು ಬೆಳ್ಳಂ ಬೆಳಗ್ಗೆಯೇ ಸ್ಪರ್ಧೆಗೆ ನಿಂತಂತೆ ಓಡಾಟ ನಡೆಸುವುದನ್ನು ಕಂಡರೆ ಮೈ ಜುಮ್ ಅನ್ನಿಸುತ್ತದೆ  ಅಷ್ಟೊಂದು ವೇಗವಾಗಿ ಗಾಡಿ ಓಡಿಸುತ್ತಿರುತ್ತಾರೆ  ಮರಳು ಸಾಗಾಟ ಲಾರಿಗಳ ಉಪಟಳದಿಂದ ಪರಿಸರವಾಸಿಗಳು ಪಡುತ್ತಿರುವ ಬವಣೆ ಅಷ್ಟಿಷ್ಟಲ್ಲ  ಈ ಬಗ್ಗೆ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೆ  ಮರಳು ತೆಗೆಯುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ  ಅದು ನಮಗೆ ಬರುವುದಿಲ್ಲ  ನೀವು ಭೂ ಮತ್ತು ಗಣಿವಿಜ್ಞಾನ ಅಧಿಕಾರಿಗಳಿಗೆ ತಿಳಿಸಿ  ಎಂದು ಹೇಳುತ್ತಾರೆ  ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ  ಕೂಡಲೇ ದಾಳಿ ನಡೆಸುತ್ತೇವೆ  ಮಟ್ಟ ಹಾಕುತ್ತೇವೆ  ಎಂದು ಹೇಳುವವರು ಎಷ್ಟೇ ದಿನ ಉರುಳಿದರೂ ಮರಳು ತೆಗೆಯುವವರ ಮೇಲೆ ಕ್ರಮ ತೆಗೆಯದೆ ಇರಲು ಕಾರಣ ಗೊತ್ತಾಗುತ್ತಿಲ್ಲ. ಆದ್ದರಿಂದ ಕೂಡಲೇ ಮರಳು ತೆಗೆಯುತ್ತಿರುವ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳ ಸ್ಥಿತಿ ನೋಡಿಯಾದರೂ ಮರಳುಗಾರಿಕೆ ನಡೆಸುತ್ತಿರುವವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ನಾಗರಿಕರನ್ನು ರಕ್ಷಿಸಬೇಕಿದೆ

  • ಸುಕೇಶ್ ಸುವರ್ಣ  ಕೊಟ್ನಾಯಗುತ್ತು