ಪೆÇಲೀಸ್ ಅಧಿಕಾರಿಯಾಗಿ ಯಶ್

ರಾಕಿಂಗ್ ಸ್ಟಾರ್ ಯಶ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್’ ಸಿನಿಮಾದಲ್ಲಿ ನಟಿಸುತ್ತಿದ್ದು ಅದಾದ ಬಳಿಕ ಮುಂದಿನ ಚಿತ್ರದಲ್ಲಿ ಯಶ್ ಪೊಲೀಸ್ ವರ್ಧಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ. ಹರ್ಷ ಅಲರ ನಿರ್ದೇಶನದ `ರಾಣಾ’ ಸಿನಿಮಾದಲ್ಲಿ ಮೊದಲ ಬಾರಿಗೆ ಯಶ್ ಪೆÇಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾನೆ.

ಸದ್ಯ 5 ಭಾಷೆಗಳಲ್ಲಿ ತಯಾರಾಗುತ್ತಿರುವ `ಕೆಜಿಎಫ್’ ಸಿನಿಮಾದಲ್ಲಿ ಬೇರೆಯದೇ ರೀತಿಯ ಗೆಟಪ್ಪಿನಲ್ಲಿ ಯಶ್ ತೆರೆಯ ಮೇಲೆ ಬರಲಿದ್ದಾನೆ. ಚಿತ್ರದ ಶೂಟಿಂಗ್ ಈಗ ಭರದಿಂದ ಸಾಗುತ್ತಿದ್ದು ಅದಾದ ಬಳಿಕ `ರಾಣಾ’ ಚಿತ್ರಕ್ಕೆ ಡೇಟ್ಸ್ ಹೊಂದಾಣಿಸಿಕೊಳ್ಳಲಿದ್ದಾನೆ.