ಪಾರ್ಲಿಮೆಂಟ್, ಅಸೆಂಬ್ಲಿಗೆ ಏಕಕಾಲಕ್ಕೆ ಚುನಾವಣೆ ಅಗತ್ಯ

ಸಾಂದರ್ಭಿಕ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕೆಂದು ಹೇಳಿರುವುದರಲ್ಲಿ ವಿವೇಕವಿದೆ. ಏಕಕಾಲಕ್ಕೆ ಪಾರ್ಲಿಮೆಂಟ್ ಹಾಗೂ ಅಸೆಂಬ್ಲಿಗಳಿಗೆ ಚುನಾವಣೆ ನಡೆಯುವುದರಿಂದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಮಾಡುವ ವೆಚ್ಚ ಕಡಿಮೆಯಾಗುತ್ತದೆ. ಪ್ರಸ್ತುತ ರೂಪಾಯಿ 500, 1000 ನೋಟುಗಳ ಚಲಾವಣೆ ರದ್ದಾಗಿರುವುದರಿಂದ ಒಂದೇ ಬಾರಿ ಚುನಾವಣೆ ನಡೆಯಬೇಕೆಂಬುದನ್ನು ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಸ್ವಾಗತಿಸುತ್ತಾರೆಂಬುದರಲ್ಲಿ ಸಂಶಯವಿಲ್ಲ.

ದೇಶದಲ್ಲಿ ಬೇರೆ ಬೇರೆ ಕಾಲದಲ್ಲಿ ಚುನಾವಣೆ ನಡೆದರೆ ಯೋಜನೆಗಳ ಅನುಷ್ಠಾನದಲ್ಲಿ ನೀತಿ ಸಂಹಿತೆಯಿಂದ ತೊಂದರೆ ಮಾತ್ರವಲ್ಲ. ರಾಜಕಾರಣಿಗಳು ಯಾವಾಗಲೂ ಚುನಾವಣಾ ಪ್ರಚಾರದಲ್ಲಿ ಸಮಯ ಕಳೆಯಬೇಕಾಗುತ್ತದೆ. ದೇಶದ ಅಭಿವೃದ್ಧಿ, ಜನರ ಸಮಸ್ಯೆಗಳ ಪರಿಹಾರದತ್ತ ಗಮನ ನೀಡಲಾಗುವುದಿಲ್ಲ.

ಸದಾನಂದ ಹೆಗಡೆಕಟ್ಟೆ, ಮೂಡಬಿದ್ರೆ