ನಿರೀಕ್ಷೆ ಮೂಡಿಸಿದ `ಜಗ್ಗಾ ಜಾಸೂಸ್’ ಟ್ರೇಲರ್

ಕೆಲವು ಫ್ಲಾಪ್ ಚಿತ್ರಗಳ ನಂತರ ಕೊನೆಗೂ `ಏ ದಿಲ್ ಹೇ ಮುಶ್ಕಿಲ್’ ಚಿತ್ರದ ಸಕ್ಸಸ್ ನಂತರ ರಣಬೀರ್ ಕಪೂರ್ ಇನ್ನೊಂದು ವಿಭಿನ್ನ ಚಿತ್ರದಲ್ಲಿ ನಟಿಸುತ್ತಿದ್ದಾನೆ. ರಣಬೀರ್ ಹಾಗೂ ಕತ್ರೀನಾ ಕೈಫ್ ಅಭಿನಯದ ಮುಂಬರುವ ಸಿನಿಮಾ `ಜಗ್ಗಾ ಜಾಸೂಸ್’ ಟ್ರೇಲರ್ ಬಿಡುಗಡೆಯಾಗಿದೆ. ಅನುರಾಗ್ ಬಸು ನಿರ್ದೇಶಿಸಿರುವ ಈ ಸಿನಿಮಾ ಇತರ ಬಾಲಿವುಡ್ ಸಿನಿಮಾಗಳಿಗಿಂತ ಭಿನ್ನವಾಗಿದೆ ಎಂದು ಟ್ರೇಲರ್ ನೋಡಿದರೇ ಹೇಳಬಹುದು.
ಆಸ್ಟ್ರೀಚ್ ಮೇಲೆ ಸವಾರಿಯಿಂದ ಹಿಡಿದು ಆನೆಮರಿ ಜೊತೆ ರೇಸ್‍ವರೆಗೆ ಈ ಸಿನಿಮಾದಲ್ಲಿ ಕಾಣಬಹುದು. ಅನುರಾಗ್ ಬಸುವಿನ ವಿಭಿನ್ನ ಪರಕಲ್ಪನೆಗೆ ಈ ಚಿತ್ರ ಅವರಿಗೆ ದಾರಿ ಮಾಡಿಕೊಟ್ಟಿದೆ ಎಂದೇ ಹೇಳಬಹುದು.
ರಣಬೀರ್ ಕಪೂರನ ನಟನೆಯಂತೂ ಕೆಲವು ಕಡೆ `ಬರ್ಫಿ’ ಚಿತ್ರ ನೆನಪಿಸುವಂತೆ ಮಾಡುತ್ತದೆ. ವಿಶೇಷವೆಂದರೆ ಟ್ರೇಲರಿನಲ್ಲಿ ಎಲ್ಲೂ ಡೈಲಾಗ್‍ಗಳೇ ಇಲ್ಲ.
ತನ್ನ ಕಳೆದುಹೋಗಿರುವ ತಂದೆಯನ್ನು ಹುಡುಕುತ್ತಿರುವ ಓರ್ವ ವ್ಯಕ್ತಿಯ ಸುತ್ತ ಈ ಕಥೆ ಸುತ್ತುತ್ತದೆ. ಸಿನಿಮಾ 2017ರ ಎಪ್ರಿಲ್ 7ರಂದು ತೆರೆಕಾಣಲಿದೆ. ರಣಬೀರ್-ಕತ್ರೀನಾ ಬ್ರೇಕಪ್ ನಂತರ ಬರುತ್ತಿರುವ ಮೊದಲ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ. ಜೊತೆಗೇ ಬೇರೆಯದೇ ರೀತಿಯ ಚಿತ್ರ ಇದಾಗಿರುವುದರಿಂದ ಸಿನಿರಸಿಕರಲ್ಲಿ ಈಗಲೇ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸದೆ.