ನಗರ ಪಾಲಿಕೆ ವ್ಯಾಪಾರಸ್ಥರಿಗೆ ಆನಲೈನ್ ಮೂಲಕ ಉದ್ದಿಮೆ ಪರವಾನಿಗೆ ನೀಡಲಿ

ಮನಪಾ ಅಧಿಕಾರಿಗಳಿಗೆ ವ್ಯಾಪಾರಸ್ಥರ ಬಗ್ಗೆ ಕಾಳಜಿ ಇದ್ದರೆ ಅಂಗಡಿಗಳಿಗೆ ತೆರಳಿ  ಅಲ್ಲಿಯೇ ಹಣ ಪಡೆದು ರಶೀದಿಯೊಂದಿಗೆ ಪರವಾನಿಗೆ ನೀಡಿ ಅದನ್ನು ಸಕ್ರಮಿಕರಿಸಿದರೆ ಸಾರ್ವಜನಿಕ ವ್ಯಾಪಾರಿಗಳಿಗೆ ಅನಗತ್ಯ ಕಿರುಕುಳ ತಪ್ಪುತ್ತದೆ  ಮನಪಾ ಕಚೇರಿಗೆ ತೆರಳಿದರೆ ಪರವಾನಿಗೆ ಪಡೆದುಕೊಳ್ಳಲು ವ್ಯಾಪಾರಿಗಳು ಹೆಣಗಾಡಬೇಕಾಗುತ್ತದೆ  ತಮ್ಮ ಅಮೂಲ್ಯವಾದ ಸಮಯ ವಿನಾಕಾರಣ ವ್ಯರ್ಥ ಮಾಡಬೇಕಾಗುತ್ತದೆ
ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಿ ಮಂಗಳೂರು ಪಾಲಿಕೆ ಹೆಚ್ಚು ಉತ್ತೇಜನ ಕೊಟ್ಟು ಆನಲೈನ್‍ಗಳ ಮೂಲಕ ಹಾಗೂ ಡೆಬಿಟ್-ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡುವವರಿಗೆ ಅನುಕೂಲ ಮಾಡಲಿ

  • ಟಿ ಸುಪ್ರಿತ್ ಕುಮಾರ್ ಪೂಜಾರಿ  ಮಂಗಳೂರು