ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಂ ತಪ್ಪಿಸಿ

ಅಭಿವೃದ್ಧಿಯ ನಾಗಾಲೋಟದಲ್ಲಿ ಹೆಜ್ಜೆ ಹಾಕುತ್ತಿರುವ ದೇಶದ ಪ್ರಮುಖ ನಗರಗಳಲ್ಲಿ ಮಂಗಳೂರು ಕೂಡ ಒಂದು. ಕರಾವಳಿ ಭಾಗಕ್ಕೆ ಪ್ರತೀ ದಿನಾಲೂ ಬೇರೆ ಬೇರೆ ಕೆಲಸಗಳ ಮೇಲೆ ಸಾವಿರಾರು ಜನರು ಬರುತ್ತಾರೆ  ಜಿಲ್ಲೆಗೆ ಬರುವ ಬಹುತೇಕ ಜನರೆಲ್ಲರೂ ರಸ್ತೆ ಮಾರ್ಗವಾಗಿಯೇ ಚಲಿಸುತ್ತಾರೆ  ಆದರೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗೋದು ಪ್ರತಿನಿತ್ಯವೂ ತಪೀದಿಲ್ಲ.  ನಗರದ ನಂತೂರು ಸರ್ಕಲಿನಲ್ಲಿ ಸಿಗ್ನಲ್ ದೀಪಗಳು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ  ಒಂದೂ ದಿನವೂ ಈ ಸಿಗ್ನಲ್ ದೀಪ ಕೆಲಸವೇ ಮಾಡಿಲ್ಲ  ಇದು ನಂತೂರು ಒಂದು ಕಡೆಯ ಸಮಸ್ಯೆ ಮಾತ್ರವಲ್ಲ  ನಗರದ ಬಹುತೇಕ ಕಡೆಗಳಲ್ಲಿ ಇದೇ ಸಮಸ್ಯೆ ಇದೆ. ಸಂಬಂಧಿಸಿದವರು ತಕ್ಷಣ ಕ್ರಮ ಕೈಗೊಂಡರೆ ಪ್ರಯಾಣಿಕರು ಮತ್ತು ವಾಹನ ಸವಾರರು ನಿಟ್ಟುಸಿರು ಬಿಡಬಹುದು

ಅವಿನಾಶ್  ಕಡೇಶಿವಾಲಯ