ಧನುಷ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಕಾಜೋಲ್

ಕಾಜೋಲ್ ದೇವಗನ್ 20 ವರ್ಷಗಳ ಬಳಿಕ ತಮಿಳು ಚಿತ್ರರಂಗಕ್ಕೆ ಮರಳಿದ್ದಾಳೆ. ಧನುಷ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ `ವಿಐಪಿ 2′ ಚಿತ್ರದಲ್ಲಿ ಬಾಲಿವುಡ್ ನಟಿ ಕಾಜೋಲ್ ಅಭಿನಯಿಸಲಿದ್ದಾಳೆ. ರಜನಿಕಾಂತ್ ಪುತ್ರಿ ಸೌಂದರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾಳೆ. ಈ ಚಿತ್ರದ ಶೂಟಿಂಗ್ ಕಾರ್ಯ ಮೊನ್ನೆ ಆರಂಭವಾಗಿದೆ. ಈ ನಡುವೆ, ಬಿಡುವಿನ ಸಮಯದಲ್ಲಿ ಧನುಷ್, ಕಾಜೋಲ್, ಸೌಂದರ್ಯ ರಜನಿಕಾಂತ್ ಫೆÇೀಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದಾರೆ.
ಕಾಜೋಲ್ ಈ ಮೊದಲು ತಮಿಳಿನ `ಮಿನ್ಸರ ಕಣವು’ ಎನ್ನುವ ಚಿತ್ರದಲ್ಲಿ ಪ್ರಭುದೇವ ಹಾಗೂ ಅರವಿಂದ ಸ್ವಾಮಿ ಜೊತೆ ನಟಿಸಿದ್ದಳು. ಧನುಷ್ ಪ್ರೊಡ್ಯೂಸ್ ಮಾಡುತ್ತಿರುವ ಈ ಚಿತ್ರಕ್ಕೆ ಅವನ ಮಾವ ರಜನಿಕಾಂತ್ ಚಾಲನೆ ನೀಡಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಅಮಲಾ ಪೌಲ್ ಧನುಷ್ ಜೊತೆ ರೊಮ್ಯಾನ್ಸ್ ಮಾಡಿದ್ದಳು.