`ದಿ ವಿಲನ್’ ನಾಯಕಿ ಆಮಿ ಜಾಕ್ಸನ್

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೋಡಿಯ `ದಿ ವಿಲನ್’ ಚಿತ್ರಕ್ಕೆ ನಾಯಕಿಯಾಗಿ ಬ್ರಿಟಿಷ್ ಬೇಬ್ ಆಮಿ ಜಾಕ್ಸನ್ ಆಯ್ಕೆಯಾಗಿದ್ದಾಳೆ. ಬ್ರಿಟಿಷ್ ಮಾಡೆಲ್ ಹಾಗೂ ನಟಿಯಾಗಿರುವ ಆಮಿ ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್, ಚಿಯಾನ್ ವಿಕ್ರಮ್, ಅಕ್ಷಯ್ ಕುಮಾರ್, ಧನುಷ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾಳೆ. ಈಗ ಕನ್ನಡದ ಸ್ಟಾರ್ ನಟರ ಜೊತೆಯೂ ನಟಿಸುವ ಅವಕಾಶ ಆಕೆಗೆ ಒದಗಿದೆ.
ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಾಗಿ ಸಿನಿಮಾದಲ್ಲಿ ಅಭಿನಯಿಸಲಿದ್ದು ಶೂಟಿಂಗ್ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ. ಈ ಮೊದಲು `ವಿಲನ್’ ಚಿತ್ರಕ್ಕಾಗಿ ಸೌತ್ ಸುಂದರಿ ತಮನ್ನಾ ಭಾಟಿಯಾ ಹಾಗೂ ಅನುಷ್ಕಾ ಶೆಟ್ಟಿ ಹೆಸರು ಕೇಳಿಬಂದಿತ್ತು. ನಂತರ ಹಲವು ಬಾಲಿವುಡ್ ನಟಿಯರ ಹೆಸರುಗಳು ಆಯ್ಕೆಪಟ್ಟಿಯಲ್ಲಿದ್ದರೂ ಅದೀಗ ಆಮಿ ಪಾಲಾಗಿದೆ.
ಆಮಿ ಜಾಕ್ಸನ್ ಸದ್ಯಕ್ಕೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ `2.0′ ಚಿತ್ರದಲ್ಲಿ ನಾಯಕಿಯಾಗಿದ್ದಾಳೆ. ಆ ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಆಮಿ `ದಿ ವಿಲನ್’ ತಂಡವನ್ನ ಸೇರಿಕೊಳ್ಳಲಿದ್ದಾಳೆಯಂತೆ.