ಡಾಲರಿಗೆ 72.5 ರೂಪಾಯಿಯಷ್ಟು ಕುಸಿಯಲಿರುವ ಭಾರತದ ಕರೆನ್ಸಿ

ನವದೆಹಲಿ : ಮುಂಬರುವ ತಿಂಗಳುಗಳಲ್ಲಿ ಭಾರತದ ರೂಪಾಯಿಯ ಮೌಲ್ಯ ಇನ್ನೂ ಕುಸಿತ ಕಾಣಲಿದ್ದು ಡಿಸೆಂಬರ್ ಅಂತ್ಯದ ವೇಳೆಗೆ 70 ರೂ ಆಸುಪಾಸು ಇರುತ್ತದೆ. 2017ರ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯ ಡಾಲರ್ ಒಂದಕ್ಕೆ 72.5ರಷ್ಟಾಗುತ್ತದೆ ಎಂದು ಡೇಷ್ ಬ್ಯಾಂಕ್ ಸಂಶೋಧನಾ ವರದಿಯೊಂದು ಹೇಳಿದೆ.

ಜಾಗತಿಕ ಹಣಕಾಸು ಸೇವೆಯ ಪ್ರಮುಖ ಸಂಸ್ಥೆಯೊಂಧರ ಪ್ರಕಾರ ಅಮೆರಿಕದ ಚುನಾವಣೆಗಳ ನಂತರ ತುರ್ತು ಸ್ಥಿತಿಯ ಮಾರುಕಟ್ಟೆ ವಿದೇಶಿ ವಿನಿಮಯದಲ್ಲಿನ ಏರುಪೇರು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ. ರೂಪಾಯಿ ಮೌಲ್ಯ ಇನ್ನೂ ಕುಸಿಯುವ ಸಂಭವವಿದ್ದು ಭಾರತದ ಪಾವತಿಯ ಮೊತ್ತ ಕಡಿಮೆಯಾಗಿದ್ದರೂ ಈ ಕುಸಿತ ಮುಂದುವರೆಯುತ್ತದೆ ಎಂದು ಡೇಷ್ ಬ್ಯಾಂಕಿನ ವಕ್ತಾರರು ಹೇಳಿದ್ದಾರೆ.