ಜಯಾ ಸಾವಿನ ರಹಸ್ಯ

ಜಯಲಲಿತಾ ನಿಧನದ ಬಳಿಕ ತಮಿಳ್ನಾಡು ರಾಜಕೀಯ ಯಾವ ದಿಕ್ಕು ಹಿಡಿಯುವುದೆಂದು ಹೇಳುವುದು ಕಷ್ಟವಾಗಿದೆ. ಪನೀರ್ ಸೆಲ್ವಂರವರು ಮುಖ್ಯಮಂತ್ರಿಯಾಗಿದ್ದರೂ  ಶಶಿಕಲಾ ಯಾವಾಗ ಅವರ ಕಾಲೆಳೆಯುವರು ಎಂದು ಹೇಳುವಂತಿಲ್ಲ  ತಾವೇ ಮುಖ್ಯಮಂತ್ರಿಯಾಗಲು ಶಶಿಕಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ  ಆದರೆ ಜಯಲಲಿತಾ ಅವರ ಸಾವಿನ ಕುರಿತಂತೆ ಇಷ್ಟು ರಹಸ್ಯ ಕಾಯ್ದುಕೊಳ್ಳುತ್ತಿರುವುದು ಆಶ್ಚರ್ಯಕರವಾಗಿದೆ  ಆಕೆ ನಿಧನವಾದ ಬಳಿಕವಾದರೂ ಈ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಬಾರದೇಕೆ ? ಈ ರೀತಿ ಮಾಹಿತಿಯನ್ನು ಗುಪ್ತವಾಗಿಟ್ಟುಕೊಳ್ಳಲು ಯಾರ ಒತ್ತಡ ಕಾರಣ ?

 

  • ಗಂಗಾಧರ ಕಾಸರಗೋಡು