ಕಾಮಿಡಿ ಕಿಲಾಡಿಗಳಲ್ಲ ಪೋಲಿ ಕಿಲಾಡಿಗಳು

ಝೀ ಕನ್ನಡ ವಾಹಿನಿಯಲ್ಲಿ ಶನಿ ರವಿವಾರ 9 ಗಂಟೆಗೆ ಪ್ರಸಾರವಾಗುವ  ಕಾಮಿಡಿ ಕಿಲಾಡಿ  ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿತ್ತು. ಬರಬರುತ್ತಾ ಈ ಕಾರ್ಯಕ್ರಮ ಅಶ್ಲೀಲ ಪದಗಳ  ದಂದ್ವಾರ್ಥ ಸಂಭಾಷಣೆ ಹಾಗೂ ಕೆಟ್ಟ ದೃಶ್ಯಗಳಲ್ಲಿ ಬರುತ್ತಿದೆ  ಇದರಿಂದ ಕುಟುಂಬ ಸಮೇತ ನೋಡಲಾಗುವುದಿಲ್ಲ  ಹಾಸ್ಯ ಬರೀ ಹಾಸ್ಯಗಳಿಗೆ ಸೀಮಿತವಾಗಬೇಕು  ಅಶ್ಲೀಲವಾದ್ರೆ ಇಡೀ ಹಾಸ್ಯವೇ ಹಾಳಾಗುತ್ತದೆ  ದಯವಿಟ್ಟು ಈ ಕಾರ್ಯಕ್ರಮದ ಸಂಘಟಕರು ಗಮನಿಸಿ  ಟೀವಿ ಕಾರ್ಯಕ್ರಮ ಸದಭಿರುಚಿಯ ದೃಶ್ಯಾವಳಿಯಿಂದ ಕೂಡಿರುವ ನಕ್ಕು ನಲಿಸುವ ಕಾಮಿಡಿಗಳಾಗಲಿ ಇಲ್ಲದಿದ್ರೆ ಇದು  ಪೋಲಿ ಕಾಮೆಡಿ ಗಳಾಗೀತು

  • ಮುರಾರಿ ಪುತ್ತೂರು