ಕಾಂಗ್ರೆಸ್ ಬಿಜೆಪಿಗೆ ಮಾಡಲು ಬೇರೆ ಕೆಲಸವಿಲ್ಲವೇ

ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾಡಲು ಬೇರೆ ಕೆಲಸವಿಲ್ಲವೇ ಹಣವನ್ನು ದುರುಪಯೋಗ ಮಾಡಲಾರಂಭಿಸಿದ್ದಾರೆ. ಬಿಜೆಪಿಯಿಂದ ಪರಿವರ್ತನಾ ಯಾತ್ರೆ ಆಯ್ತು. ಈಗ ಕಾಂಗ್ರೆಸ್ಸಿಗರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು. ಆದರೆ ಉಡುಪಿ ಮತ್ತು ಬೈಂದೂರು ಕ್ಷೇತ್ರದಲ್ಲಿ ಜನರಿಗೆ ಬೇಕಾದ ಯಾವ ಮೂಲ ಸೌಕರ್ಯ ಇಂದಿಗೂ ಆಗಿಲ್ಲ. ಎಷ್ಟೋ ಮಂದಿಗೆ ಜಾಗ ನೀಡಿದ್ದಾರೆ. ಆದರೆ ಮನೆ ನಿರ್ಮಿಸಿಕೊಡಲು ಇಂದಿಗೂ ಸರಕಾರ ಅಸಮರ್ಪಕವಾಗಿದೆ. ಈ ಎರಡೂ ಕ್ಷೇತ್ರದಲ್ಲಿ ಎಲ್ಲೋ ಒಂದೆರಡು ಮನೆ ನಿರ್ಮಿಸಿಕೊಟ್ಟು ಈ ರೀತಿ ಸಮಾವೇಶ ಮಾಡುವುದಕ್ಕಿಂತ ಹೊಗಳದೆ ಮೊದಲು ಕೆಲಸ ಮಾಡಿ ತೋರಿಸಲಿ. ಜನತೆಗೆ ಬೇಕಾಗಿರುವುದು ಆಶ್ವಾಸನೆ ಅಲ್ಲ. ಈಡೇರಿಕೆ. ರಸ್ತೆ ಮಾಡಿಸಿ ಊರಿಗೆ ಬೇಕಾದ ಶಾಲೆ ಆಸ್ಪತ್ರೆ ಇತರೆ ಸೌಲಭ್ಯ ಒದಗಿಸಿ ನಿಮ್ಮ ಆಡಂಬರಕ್ಕೆ ಜನತೆಯ ಹಣವನ್ನು ಬಳಸದಿರಿ ಮನೆ ಇಲ್ಲದೆ ವಾಸಿಸುತ್ತಿರುವ ಜನರಿಗೆ ಬೇಗನೆ ಮನೆ ಕಟ್ಟಿಸಿ ಕೊಟ್ಟು ಕರುಣಾಮಯಿ ಆಗಿರಿ ನಿಮ್ಮ ಹೆಸರಾದರೂ ಹೇಳಿಯಾರು ಯಾವ ಕೆಲಸವೂ ಜನರಿಗೆ ಬೇಕಾಗಿ ಈ ಎರಡು ಕ್ಷೇತ್ರದಲ್ಲಿ ಆಗದೇ ಈ ರೀತಿ ಸಾಧನಾ ಸಮಾವೇಶ ಮಾಡುವುದು ಸರಿಯಲ್ಲ ಇನ್ನಾದರೂ ನಿದ್ದೆಯಿಂದ ಎದ್ದು ಬಡ ಜನತೆಯ ಆಶ್ವಾಸನೆಗೆ ಸ್ಪಂದಿಸಿ ಬೇಕಾದ ಸೌಕರ್ಯ ಕೊಡಿಸುವಲ್ಲಿ ಮುಂದಾಗಿ ಮುಖ್ಯಮಂತ್ರಿಯವರೇ ಮಾಡದೇ ಇರುವ ಕೆಲಸವನ್ನು ಮಾಡಿದ್ದೇನೆ ಎಂಬ ಸಮಾವೇಶ ಮಾಡುವುದಕ್ಕಿಂತ ಮಾಡಿ ತೋರಿಸಿ ಜನರ ಆಶೀರ್ವಾದಕ್ಕೆ ಗುರಿಯಾಗಲಿ

  • ಧರಣೇಶ  ಸಿದ್ದಾಪುರ
    ಗ್ರಾಮ ಕುಂದಾಪುರ

LEAVE A REPLY