ಕಂಬಳ ಬೆಂಬಲಿಸಿ ಮಾನವ ಸರಪಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಹೈಕೋರ್ಟಿನಲ್ಲಿ ಕಂಬಳಕ್ಕೆ ಜಯ ಸಿಗುವ ಎಲ್ಲಾ ವಿಶ್ವಾಸವಿದೆ. ಜಲ್ಲಿಕಟ್ಟಿನ ಜೊತೆ ಕಂಬಳವನ್ನು ತುಲನೆ ಮಾಡಲಾಗುತ್ತಿದೆ. ಕಂಬಳದಲ್ಲಿ ಯಾವುದೇ ಪ್ರಾಣಿ ಹಿಂಸೆ ನೀಡಲಾಗುವುದಿಲ್ಲ. ನಾವು ಕಂಬಳ ನಿಷೇಧದ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇವೆ” ಎಂದು ಸಂಸದ ನಳಿನ್ ಹೇಳಿದರು.

ಮಂಗಳೂರಿನಲ್ಲಿ ಮಂಗಳವಾರ ನಡೆದ ಕಂಬಳ ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಜ 28ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಲಾಯಿತು. ಅಲ್ಲದೆ ಇದಕ್ಕೆ ಪೂರ್ವಭಾವಿಯಾಗಿ ಜ 27ರಂದು ಬೆಳಿಗ್ಗೆ 10ಕ್ಕೆ ಹಂಪನಕಟ್ಟೆಯಲ್ಲಿ ಮಾನವ ಸರಪಳಿಯನ್ನೂ ನಡೆಸಲು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು” ಎಂದರು.