ಅಕ್ರಮ ಹಣ ಸಾಗಿಸುತ್ತಿದ್ದವ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ದಾಖಲೆ ಪತ್ರಗಳಿಲ್ಲದೆ ರೈಲಿನಲ್ಲಿ ಸಾಗಿಸಲಾಗುತ್ತಿದ್ದ ಎಂಟು ಲಕ್ಷ ರೂ.ವನ್ನು ಕಲ್ಲಿಕೋಟೆ ರೈಲು ನಿಲ್ದಾಣದಿಂದ ರೈಲ್ವೇ ಪೆÇ್ರಟೆಕ್ಷನ್ ಫೆÇೀರ್ಸ್ ವಶಕ್ಕೆ ಪಡೆದಿದೆ. ಈ ಸಂಬಂಧ ತ್ರಿಶೂರು ಕೊಡುಂಗಲ್ಲೂರು ನಿವಾಸಿ ಉಳ್ಳಿಶ್ಯೇರಿ ರಫೀಕ್ (41) ಎಂಬಾತನನ್ನು ಬಂಧಿಸಲಾಗಿದೆ.

ಮಂಗಳೂರಿನಿಂದ ಹೊರಟ ರೈಲಿನಲ್ಲಿ ಈತ ಕಲ್ಲಿಕೋಟೆಯಲ್ಲಿ ಇಳಿದು ಶಂಕಾಸ್ಪದ ರೀತಿಯಲ್ಲಿ ಒಂದೆಡೆ ಕುಳಿತಿರುವಾಗ ಇದನ್ನು ಕಂಡ ಅಧಿಕಾರಿಗಳು ಆತನನ್ನು ಹಿಡಿದು ಪರಿಶೀಲಿಸಿದಾಗ ಆತನ ಬ್ಯಾಗಿನಲ್ಲಿ ಹಣ ಪತ್ತೆಯಾಗಿದೆ. ಕೂಡಲೆ ಈತನನ್ನು  ಎನ್ಫೋಸ್ರ್ಮೆಂಟ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.